ಕೋನ್, ಫರ್ಡಿನ್ಯಾಂಡ್ ಜೂಲಿಯಸ್
	1828-1898. ಗಿಡಮರ ಜೀವಿಗಳ ಸೂಕ್ಷ್ಮದರ್ಶಕ ರೂಪಗಳನ್ನು ಆಳವಾಗಿ ಅಭ್ಯಾಸ ಮಾಡಿ ಏಕಾಣುಜೀವಿಶಾಸ್ತ್ರದ ಮೂಲಪುರುಷರಲ್ಲಿ ಒಬ್ಬನಾಗಿದ್ದ ಜರ್ಮನಿಯ ಸಸ್ಯ ಶಾಸ್ತ್ರಜÐ. ಬ್ರೆಸ್ಲೊದಲ್ಲಿ ಹುಟ್ಟಿ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಪದವೀಧರನಾಗಿ ತನ್ನ ಹುಟ್ಟೂರಿಗೆ ಮರಳಿ, ಕೊನೆಗೆ ಬ್ರೆಸ್ಲೊ ವಿಶ್ವವಿದ್ಯಾಲಯದ ಸಸ್ಯ ಅಂಗರಚನ ಶಾಸ್ತ್ರದ ಸಂಸ್ಥೆಯಲ್ಲೇ ಪ್ರಾಧ್ಯಾಪಕ-ನಿರ್ದೇಶಕನಾದ. ಇವನು ಕಡಲ್ಕಾಳೆಗಳ ಮತ್ತು ಬೂಷ್ಟುಗಳ ಶೋಧನೆಗಳಲ್ಲಿ ಕೈಹಾಕಿದ ಮೊದಲಿಗ. 1860ರಿಂದೀಚೆಗೆ ಏಕಾಣುಜೀವಿಶಾಸ್ತ್ರದಲ್ಲಿ ತಲ್ಲೀನನಾದ. ಸೂಕ್ಷಮಜೀವಾಣುಗಳ ವಿಂಗಡಣ ಪದ್ಧತಿ (1872), ಏಕಾಣುಜೀವಿಗಳ ಬೀಜಕಣಗಳ (ಸ್ಪೋರ್ಸ್) ಶೋಧನೆ, ತಾವೇ ತಾವಾಗಿ ವಿಕಾಸವಾಗುವುದರಲ್ಲಿ ಏಕಾಣು ಜೀವಿಗಳ ಬೀಜಕಣಗಳ ಪಾತ್ರ-ಇವು ಅವನ ವೈಜಾÐನಿಕ ಕೊಡುಗೆಗಳಲ್ಲಿ ಮುಖ್ಯವಾದವು. ತನ್ನ ಖಚಿತವಾದ ರೂಪಶಾಸ್ತ್ರಕ ಶೋಧನೆಗಳಿಂದ ಏಕಾಣುಜೀವಿಗಳನ್ನೆಲ್ಲ ಜಾತಿ (ಜೆನೆರ), ಪ್ರಭೇದಗಳಾಗಿ (ಸ್ಪೀಶೀಸ್) ನಾಲ್ಕು ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವೆಂದು ಆಗಲೇ ಹೇಳಿದ್ದ. ಹಾಗೆಂದರೂ ಕೇವಲ ರೂಪದಿಂದ ಮಾತ್ರವೇ ಹಾಗೆ ವೀಂಗಡಿಸಲಾಗದೆಂದೂ ಮನಗಂಡಿದ್ದ. ಏಕಾಣುಜೀವಿಗಳನ್ನು ತಳಿಯೆಬ್ಬಿಸಿ ಹುಲುಸಾಗಿ ಬೆಳೆಸುವ ಕೋನದ ದ್ರವ ಈಗಲೂ ಚಾಲ್ತಿಯಲ್ಲಿದೆ. ಒಂದೇ ತೆರನಾಗಿ ತೋರುವ ಜೀವಾಣುಗಳ ಕೆಲಸ, ಜೈವಿಕ ಗುಣಗಳೂ ಬೇರೆಬೇರೆ ಆಗಿರಬಹುದೆಂದೂ ಮೊದಲಾಗಿ ಕಂಡುಕೊಂಡಿದ್ದ. ಆಗಿನ ಕಾಲಕ್ಕೆ ಏಕಾಣುಜೀವಿಗಳ ವಿಚಾರವಾಗಿ ಎಲ್ಲವನ್ನೂ ಅರಿತ ಒಬ್ಬನೇ ಒಬ್ಬ ಪರಿಣತ ಕೋನ್. ನೆರಡಿ (ಅಂತ್ರಾಕ್ಸ್) ಇಲ್ಲವೇ ತೊರಳೆ ಜ್ವರದ ಕಾರಕ ಒಂದು ದಂಡಾಣುಜೀವಿ (ಬೆಸಿಲಸ್) ಎಂದು ಆಗಿನ್ನೂ ಹೆಸರಾಗಿರದಿದ್ದ ರಾಬರ್ಟ್ ಕಾಕ್ ಪುರಾವೆಗಳನ್ನು ತೋರಿಸಿ ಕೊಟ್ಟದ್ದು (1876) ಕೋನನ ಪ್ರಯೋಗಾಲಯದಲ್ಲೇ. ಕೋನ್, ನೆರಡಿ (ಆಂತ್ರಾಕ್ಸ್) ಇಲ್ಲವೇ ತೊರಳೆ ಜ್ವರದ ಕಾರಕ ಒಂದು ದಂಡಾಣುಜೀವಿ (ಬೆಸಿಲಸ್) ಎಂದು ಆಗಿನ್ನೂ ಹೆಸರಾಗಿರದಿದ್ದ ರಾಬರ್ಟ್‍ಕಾಕ್ ಪುರಾವೆಗಳನ್ನು ತೋರಿಸಿ ಕೊಟ್ಟದ್ದು (1876) ಕೋನನ ಪ್ರಯೋಗಾಲಯದಲ್ಲೇ. ಕೋನ್ ಉತ್ತಮ ಉಪಾಧ್ಯಾಯ ಮತ್ತು ವಿಜಾÐನ ಪ್ರಚಾರಿ. ಇವನು ಲಂಡನ್ನಿನ ರಾಯಲ್ ಸೊಸೈಟಿಯ ಸದಸ್ಯನೂ ಆಗಿದ್ದ. 					  (ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ